Saturday 23 August 2014

ಪ್ರವೇಶೋತ್ಸವ -2014-15


ಪ್ರವೇಶೋತ್ಸವ -2014-15
ಶಾಲೆಯೆಂಬುದು ಜ್ಞಾನದ ಬೆಳಕನ್ನು ಬೆಳಗಿಸುವ ವಿದ್ಯಾದೇಗುಲ. ಇದರಂತೆ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ದಿನಾಂಕ 2-6-2014 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯಿತು. ನವಾಗತರನ್ನು ಆಕರ್ಷವಾದ ಘೋಷಣಾ ವಾಕ್ಯಗಳನ್ನು ಕೂಗುತ್ತಾ ವೈಭವದ ಮೆರವಣಿಗೆಯೊಂದಗೆ ಶಾಲಾ ಸಭಾಂಗಣಕ್ಕೆ ಕರೆ ತರಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.. ಅಧ್ಯಕ್ಷರಾದ ಶ್ರೀ. ಯೂಸಫರವರು ವಹಿಸಿದರು. ಮಂಜೇಶ್ನರ ಗ್ರಾಮಪಂಚಾಯತು ಸದಸ್ಯ ಶ್ರೀ. ಹರಿಶ್ಚಂದ್ರ ಮಂಜೇಶ್ವರರವರು ನವಾಗತರು ಶಾಲೆಯ ಕೀರ್ತಿಯನ್ನು ಬೆಳಗಲಿ ಎಂದು ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಹೇಳಿ ಶುಭವನ್ನು ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು ನವಾಗತರಿಗೆ ಶುಭವನ್ನು ಹಾರೈಸುತ್ತಾ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಮಟ್ಟಕ್ಕೆ ತಲುಪಬೇಕೆಂದೂ ಶಾಲೆಯ ಕೀರ್ತಿಯನ್ನು ಬೆಳಗಿಸಬೇಕೆಂದೂ ಹೇಳಿದರು. ಶಾಲಾ ಅಧ್ಯಾಪಕರಾದ ರಾಜೇಶಕುಮಾರ್ ರಾಜ್ಯ ಶಿಕ್ಷಣ ಸಚಿವರ ಸಂದೇಶವನ್ನು ವಾಚಿಸಿದರು. ಅಧ್ಯಾಪಕರೆಲ್ಲರು ಎಲ್ಲಾ ಮಕ್ಕಳಿಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ಕಲಿಸುವ ಉದ್ದೇಶವನ್ನಿಟ್ಟುಕ್ಕೊಂಡು ಕನ್ನಡವೇ ನಮ್ಮ ಭಾಷೆ, ಕಲಿಯುವ ಕನ್ನಡ ಭಾಷೆ ಎಂಬ ಘೋಷಣೆಯನ್ನು ಈ ವರ್ಷದ ಪ್ರತಿಜ್ಞೆಯಾಗಿ ಸ್ವೀಕರಿಸಿದರು. ಬಳಿಕ ಶಾಲಾ ಶಿಕ್ಷಕಿ ಆಶಾಲತರವರು ಪ್ರವೇಶೋತ್ಸವ ಗೀತೆಯನ್ನು ಹಾಡಿ ಮಕ್ಕಳಿಂದ ಹಾಡಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕುಗಳನ್ನು ಬರೆದ ವಿವಿಧ ಫ್ಲಕ್ ಕಾರ್ಡುಗಳನ್ನು ಪ್ರದರ್ಶಿಸುತ್ತಾ ಮಂಜೇಶ್ವರ ಜಂಕ್ಷನ್ ವರೆಗೆ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿತಿಂಡಿ ಮತ್ತು ಪಾನೀಯವನ್ನು ಹಂಚಲಾಯಿತು. ಹಾಡುಗಳು ಮತ್ತು ಆಟಗಳ ಮೂಲಕ ನವಾಗತರನ್ನು ರಂಜಿಸುತ್ತಾ ಮುಂದುವರಿದ ಕಾರ್ಯಕ್ರಮವು ಮಧ್ಯಾಹ್ನ 1.00 ಗಂಟೆಗೆ ಮುಕ್ತಾಯಗೊಂಡಿತು.

No comments:

Post a Comment