Wednesday 27 August 2014

INDEPENDENCE DAY COMPETITION

P.T.A.GENERAL BODY

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ದಿನಾಂಕ 22.8.2014 ಶುಕ್ರವಾರದಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. 2013-14ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಮಹಾಸಭೆಯಲ್ಲಿ ಮಂಜೇಶ್ವರ ಉಪಜಲ್ಲಾ ವಿದ್ಯಾಧಿಕಾರಿಯಾದ ಶ್ರೀ. ನಂದಿಕೇಶನ್ ರವರು ಉಪಸ್ಥಿತರಿದ್ದರು.

Monday 25 August 2014

ಶಾಲಾ ಚುನಾವಣೆಃ 22.8.2014

ಶಾಲಾ ಚುನಾವಣೆ 
ಪ್ರಜಾಪ್ರಭುತ್ವ ತತ್ವವನ್ನು ಅಳವಡಿಸಿಕೊಂಡು 2014-15 ನೇ ಶೈಕ್ಷಣಿಕ ಸಾಲಿನ ಶಾಲಾ ಮಟ್ಟದ ಚುನಾವಣೆಯು 22.8.2014 ರಂದು ನಡೆಯಿತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರಿಗೆ ಮತವನ್ನು ಚಲಾಯಿಸಿದರು. ತರಗತಿ ನಾಯಕನ ಆಯ್ಕೆಯಾದ ಬಳಿಕ ಶಾಲಾ ನಾಯಕನನ್ನು ಆಯ್ಕೆ ಮಾಡಲಾಯಿತು. ಅಧ್ಯಾಪಕರ ಸಮ್ಮುಖದಲ್ಲಿ ಮತ ಎಣಿಕೆ ಮಾಡಲಾಯಿತು.


Saturday 23 August 2014

ಪ್ರವೇಶೋತ್ಸವ -2014-15


ಪ್ರವೇಶೋತ್ಸವ -2014-15
ಶಾಲೆಯೆಂಬುದು ಜ್ಞಾನದ ಬೆಳಕನ್ನು ಬೆಳಗಿಸುವ ವಿದ್ಯಾದೇಗುಲ. ಇದರಂತೆ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ದಿನಾಂಕ 2-6-2014 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯಿತು. ನವಾಗತರನ್ನು ಆಕರ್ಷವಾದ ಘೋಷಣಾ ವಾಕ್ಯಗಳನ್ನು ಕೂಗುತ್ತಾ ವೈಭವದ ಮೆರವಣಿಗೆಯೊಂದಗೆ ಶಾಲಾ ಸಭಾಂಗಣಕ್ಕೆ ಕರೆ ತರಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.. ಅಧ್ಯಕ್ಷರಾದ ಶ್ರೀ. ಯೂಸಫರವರು ವಹಿಸಿದರು. ಮಂಜೇಶ್ನರ ಗ್ರಾಮಪಂಚಾಯತು ಸದಸ್ಯ ಶ್ರೀ. ಹರಿಶ್ಚಂದ್ರ ಮಂಜೇಶ್ವರರವರು ನವಾಗತರು ಶಾಲೆಯ ಕೀರ್ತಿಯನ್ನು ಬೆಳಗಲಿ ಎಂದು ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಹೇಳಿ ಶುಭವನ್ನು ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು ನವಾಗತರಿಗೆ ಶುಭವನ್ನು ಹಾರೈಸುತ್ತಾ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಮಟ್ಟಕ್ಕೆ ತಲುಪಬೇಕೆಂದೂ ಶಾಲೆಯ ಕೀರ್ತಿಯನ್ನು ಬೆಳಗಿಸಬೇಕೆಂದೂ ಹೇಳಿದರು. ಶಾಲಾ ಅಧ್ಯಾಪಕರಾದ ರಾಜೇಶಕುಮಾರ್ ರಾಜ್ಯ ಶಿಕ್ಷಣ ಸಚಿವರ ಸಂದೇಶವನ್ನು ವಾಚಿಸಿದರು. ಅಧ್ಯಾಪಕರೆಲ್ಲರು ಎಲ್ಲಾ ಮಕ್ಕಳಿಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ಕಲಿಸುವ ಉದ್ದೇಶವನ್ನಿಟ್ಟುಕ್ಕೊಂಡು ಕನ್ನಡವೇ ನಮ್ಮ ಭಾಷೆ, ಕಲಿಯುವ ಕನ್ನಡ ಭಾಷೆ ಎಂಬ ಘೋಷಣೆಯನ್ನು ಈ ವರ್ಷದ ಪ್ರತಿಜ್ಞೆಯಾಗಿ ಸ್ವೀಕರಿಸಿದರು. ಬಳಿಕ ಶಾಲಾ ಶಿಕ್ಷಕಿ ಆಶಾಲತರವರು ಪ್ರವೇಶೋತ್ಸವ ಗೀತೆಯನ್ನು ಹಾಡಿ ಮಕ್ಕಳಿಂದ ಹಾಡಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕುಗಳನ್ನು ಬರೆದ ವಿವಿಧ ಫ್ಲಕ್ ಕಾರ್ಡುಗಳನ್ನು ಪ್ರದರ್ಶಿಸುತ್ತಾ ಮಂಜೇಶ್ವರ ಜಂಕ್ಷನ್ ವರೆಗೆ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿತಿಂಡಿ ಮತ್ತು ಪಾನೀಯವನ್ನು ಹಂಚಲಾಯಿತು. ಹಾಡುಗಳು ಮತ್ತು ಆಟಗಳ ಮೂಲಕ ನವಾಗತರನ್ನು ರಂಜಿಸುತ್ತಾ ಮುಂದುವರಿದ ಕಾರ್ಯಕ್ರಮವು ಮಧ್ಯಾಹ್ನ 1.00 ಗಂಟೆಗೆ ಮುಕ್ತಾಯಗೊಂಡಿತು.

Friday 22 August 2014

WORK EXPERIENCE DAY CELEBRATION

WORK EXPERIENCE DAY CELEBRATION

ನಮ್ಮ ಶಾಲೆಯಲ್ಲಿ ನಾಟ್ಟರಿವ್ ಕಾರ್ಯಕ್ರಮವನ್ನು ತಾ.22.8.2014ರಂದು ನಡೆಸಲಾಯಿತು.

ಮ್ಯಾಸ್ ಕ್ವಿಜ್



ಮ್ಯಾಸ್ ಕ್ವಿಜ್
ತಾ.21.8.2014 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರದಲ್ಲಿ ಶಾಲಾಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಪ್ರಥಮ ಸ್ಥಾನ  : ಶಫಿಯತ್ ಶಂಶೀನ  
ದ್ವಿತೀಯ ಸ್ಥಾನ  : ಇಬ್ರಾಹಿಂ ಕಲೀಲ್. ಪಿ

ಸಾಕ್ಷರ ಮೌಲ್ಯಮಾಪನ

ಸಾಕ್ಷರ ಮೌಲ್ಯಮಾಪನ

ದೇಶಾಭಿಮಾನಿ ಕ್ವಿಜ್

ದೇಶಾಭಿಮಾನಿ ಕ್ವಿಜ್
ತಾ.20.8.2014 ರಂದು ದೇಶಾಭಿಮಾನಿ ದಿನಪತ್ರಿಕೆಯ ಸಹಭಾಗಿತ್ವದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಫಿಯತ್ ಶಂಶೀನ ಪ್ರಥಮ ಸ್ಥಾನ ಹಾಗೂ ಅಲ್ವೀನ ವರೇದ ದ್ವಿತೀಯ ಸ್ಥಾನವನ್ನು ಗಳಿಸಿದರು.

Saturday 16 August 2014

INDEPENDENCE DAY


INDEPENDENCE DAY



  

  ಧ್ವಜವಂದನೆ ಗಾಗಿ  ಸಿದ್ದತೆ



 ಧ್ವಜಾರೋಹಣ - ವಾರ್ಡ್ ಮೆಂಬರ್ ಶ್ರೀ. ಹರಿಶ್ಚಂದ್ರ ಮಂಜೇಶ್ವರ್ ಇವರಿಂದ
 
ನಾವು ರೆಡಿ


ಶಾಲಾ ಮುಖ್ಯೋಪಾಧ್ಯಾ ಯರಿಂದ ರಾಷ್ಟ್ರಪತಿಯವರ ಸಂದೇಶ

ವಿಜೇತರಿಗೆ ಬಹುಮಾನ ವಿತರಣೆ -ಪಿ.ಟಿ. ಎ .  ಅಧ್ಯಕ್ಷರಿಂದ

 
ಭಾಷಣ ---   ಸ್ವರ್ಧೆಯಲಿಲ್ ಮೊದಲ ಸ್ಥಾನ ಪಡೆದ ಸಹಲಾಂನಿಂದ

ದ್ವಿತೀಯ ಸ್ಥಾನ ಪಡೆದ ಶ್ರಾವ್ಯ ಳಿಂದ  --ಭಾಷಣ

ದೇಶಭಕ್ತಿಗೀತೆ

Thursday 14 August 2014

SCHOOL CLUBS

INAUGURATION OF SCHOOL CLUBS





ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಕುಂಜತ್ತೂರು ಪ್ರೌಢ ಶಾಲೆಯ ಅಧ್ಯಾಪಕರಾದ ಶ್ರೀ. ದಿನೇಶ್ ಇವರು ನೆರವೇರಿಸಿದರು.ಕ್ಲಬ್ ಗಳ ಉದ್ದೇಶ ಮತ್ತು ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

Thursday 7 August 2014


ವನಮಹೋತ್ಸವ ದಿನಾಚರಣೆ

 ತಾ.5.6.2014ರಂದು ಪರಿಸರ ದಿನಾಚರಣೆಯನ್ನು ಮಕ್ಕಳಿಗೆ ಗಿಡಗಳನ್ನು ಕೊಟ್ಟು ಪಿ.ಟಿ.ಎ. ಅಧ್ಯಕ್ಷರು ನಡೆಸಿದ್ದೆವು.  ಬಳಿಕ 7.7.2014ರಂದು ವನಮಹೋತ್ಸವ ದಿನದ ಅಂಗವಾಗಿ ಶಾಲೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿ ಶ್ರೀ.ನಂದಿಕೇಶನ್ ಅವರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ.ಟಿ.. ಅಧ್ಯಕ್ಷ ಶ್ರೀ.ಯೂಸಫ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಗೈಡಿನ ಮಕ್ಕಳು ಮತ್ತು ಪರಿಸ್ಥಿತಿ ಕ್ಲಬ್ಬಿನ ಮಕ್ಕಳು ನೇತೃತ್ವವನ್ನು ವಹಿಸಿದರು.

Wednesday 6 August 2014

ಚಾಂದ್ರ ದಿನಾಚರಣೆ


ಚಾಂದ್ರ ದಿನಾಚರಣೆ

ನಮ್ಮ ಶಾಲೆಯಲ್ಲಿ 21-7-2014 ರಂದು ಚಾಂದ್ರ ದಿನವನ್ನು ವಿವಿಧ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.
ಶಾಲಾ ಪಿ.ಟಿ.. ಅಧ್ಯಕ್ಷ ಶ್ರೀ.ಯೂಸಫ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಶ್ರೀ. ರಾಜೇಶ್ ಕುಮಾರ್ ಸ್ವಾಗತಿಸಿ,ಶ್ರೀಮತಿ.ಪದ್ಮಾವತಿ ವಂದಿಸಿದರು. ಮಕ್ಕಳಿಂದ ಚಾಂದ್ರಯಾನದ ಅನುಭವವನ್ನು ತೋರಿಸುವ ನಾಟಕ ಪ್ರದರ್ಶನ ನಡೆಯಿತು.ಬಳಿಕ ಸಿ.ಡಿ.ಪ್ರದರ್ಶನ,ಕ್ವಿಜ್.ಚಿತ್ರ ಪ್ರದರ್ಶನ ಇತ್ಯಾದಿಗಳು ನಡೆದುವು.ಶಾಲಾ ವಿಜ್ಞಾನ ಕ್ಲಬಿನ ಮಕ್ಕಳು ನೇತೃತ್ವ ವಹಿಸಿದರು.










                                     ಜನಸಂಖ್ಯಾ ದಿನಾಚರಣೆ

ನಮ್ಮ ಶಾಲೆಯಲ್ಲಿ 11-7-2014 ರಂದು ಜನಸಂಖ್ಯಾ ದಿನಾಚರಣೆ ಮತ್ತು ಜನಗಣತಿ ಸಪ್ತಾಹವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಯರು ಉದ್ಫಾಟಿಸಿದರು.ಶಾಲಾ ಪಿ.ಟಿ..ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ.ಸಾಧನಾ ಜನಸಂಖ್ಯಾ ದಿನದ ಸಂದೇಶವನ್ನು ಓದಿದರು.ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ತೊಂದರೆಗಳ ಬಗ್ಗೆ ಹೇಗೆ ಜಾಗರೂಕರಾಗ ಬೇಕೆಂಬುದರ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಒಂದು ವಾರದ ತನಕ ಆಚರಿಸಲಾಗುವುದೆಂದು ಅವರು ತಿಳಿಸಿದರು.
14-7-2014- ಪೋಸ್ಟರ್ ಪ್ರದರ್ಶನ
15-7-2014- ವೀಡಿಯೋ ಪ್ರದರ್ಶನ
16-7-2014 - ರಸಪ್ರಶ್ನೆ
17-7-2014- ತರಗತಿ ಮಟ್ಟದಲ್ಲಿ ಸೆಮಿನಾರ್
18-7-2014- ಸಮಾರೋಪ ಸಮಾರಂ





ಸಾಕ್ಷರ ತರಗತಿ

ಸಾಕ್ಷರ  ತರಗತಿ 

ನಮ್ಮ  ಶಾಲೆಯಲ್ಲಿ  ತಾ. 6.8.2014 ರಂದು  ಸಾಕ್ಷರ  ತರಗತಿಯನ್ನು  ಉದ್ಘಾಟಿಸಲಾಯಿತು. ತರಬೇತಿ  ಪ್ರಾರಂಭಗೊಂಡಿತು. ಐ. ಇ. ಡಿ . ಸಿ . ಮಕ್ಕಳನ್ನು  ಬಿಟ್ಟರೆ  ಉಳಿದ ಎಲ್ಲಾ  ಮಕ್ಕಳು ಬಹಳ ಉತ್ಸಾಹದಿಂದ  ಚಟುವಟಿಕೆಯಲ್ಲಿ ಭಾಗವಹಿಸಿದರು. ತರಬೇತಿಯನ್ನು  ವಾರ್ಡು ಸದಸ್ಯ  ಶ್ರೀ ಹರಿಶ್ಚಂದ್ರ  ಮಂಜೇಶ್ವರರವರು  ಉದ್ಘಾಟಿಸಿದರು.  ಹೈಸ್ಕೂಲ್  ಮುಖ್ಯೋಪಾದ್ಯಾಯರಾದ  ಶ್ರೀ ಪಾಂಡುರಂಗ  ಇವರು  ಅಧ್ಯಕ್ಷ  ಸ್ಥಾನವನ್ನು ಅಲಂಕರಿಸಿದರು. ಪಿ. ಟಿ. ಎ. ಅಧ್ಯಕ್ಷರಾದ  ಶ್ರೀ ಯೂಸಫ್ರವರು  ಶುಭವನ್ನು ಹಾರೈಸಿದರು. ಶಾಲಾ  ಮುಖ್ಯೋಪಾದ್ಯಾಯರಾದ  ಶ್ರೀ ಪಿ. ಎಸ್. ಪ್ರಭಾಕರ  ಇವರು  ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತರಗತಿಯ ಪ್ರಯೋಜನದ ಕುರಿತು ರಕ್ಷಕರಿಗೆ ಮನದಟ್ಟು ಮಾಡಿದರು. ಶ್ರೀಮತಿ ಪದ್ಮಾವತಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನೂ  ಶ್ರೀಮತಿ ಸಾಧನ ಧನ್ಯವಾದವನ್ನು  ಕೋರಿದರು. ಶ್ರೀಮತಿ ಆಶಾಲತಾ  ಕಾರ್ಯಕ್ರಮವನ್ನು  ನಿರೂಪಿಸಿದರು. 


ಸಾಕ್ಷರ ಸಾಕ್ಷರ 
ಸಾಕ್ಷರ 


Tuesday 5 August 2014

SRG MEETING


                                                       SAKSHARA CLASS

It is decided to conduct the Sakshara Class from 6.8.2014 onwards to the  weak students of class  V to VII from 3.15 p.m. to 4.15 p.m. For the convenience of the students the regular  sessions are  rescheduled as follows.  



MORINNG SESSION                            9.30 A. M. .  TO 12.30  P. M.

AFTERNOON SESSION                      1.15 P. M. TO 3,15 P. M.
SAKSHARA ACTIVITY                       3.15 P. M.  TO 4.15 P. M..
NUMBER OF BATCHES                      2
TEACHER-IN-CHARGE                        1. SMT.PADMAVATHI. M, SMT. SADHANA  SMT.JOSHNA
                                                                    2. SMT. ASHALATHA.K.     AND SRI. RAJESH       

INAUGARATION BY  THE WARD COUNCILER SRI. HARICHANDRA MANJESHWAR