Sunday 20 July 2014

DOCTOR'S DAY CELEBRATION

DOCTOR'S DAY CELEBRATION

ನಮ್ಮ ಶಾಲೆಯಲ್ಲಿ ಜುಲಾಯಿ  1 ರಂದು ಆರೋಗ್ಯ ಕ್ಲಬ್ಲಿನ ನೇತ್ರತ್ವದಲ್ಲಿ ಡಾಕ್ಟರ್ ದಿನವನ್ನು ಆಚರಿಸಲಾಯಿತು. ಮಂಜೇಶ್ವರ ಪಂಚಾಯತಿನ ಪ್ರಮುಖ ಹೋಮಿಯೊ ವೈದರಾದ ಡಾ. ಅಂಬಿಳಿಯವರು ದಿನದ ಪ್ರಾಧಾನ್ಯದ ಕರಿತು ವಿವರಿಸಿದರು. ಉತ್ತಮ ಆರೋಗ್ಯ ಹೊಂದಬೇಕಾದರೆ ನಾವು ಮಾಡಬೇಕಾದುದು ಏನು ಎಂಬುದರ ಕುರಿತು ತಿಳಿಸಿದರು.ಬಳಿಕ ಸಣ್ಣ ಪುಟ್ಟ ಕಾಯಿಲೆ ಇರುವ ಎಲ್ಲರನ್ನು ತಪಾಸಣೆ ಗೈದರು. ಔಷಧಿಯನ್ನು ನೀಡಿದರು.

ವಿಶ್ವಮಾದಕವಸ್ತು ವಿರುದ್ಧ ದಿನ

ವಿಶ್ವಮಾದಕವಸ್ತು ವಿರುದ್ಧ ದಿನ

ನಮ್ಮ ಶಾಲೆಯಲ್ಲಿ ಜೂನ್ 26ರಂದು ವಿಶ್ವ ಮಾದಕ ವಸ್ತು ವಿರುದ್ಧ ದಿನಾಚರಣೆಯನ್ನು ಆಚರಿಸ ಲಾಯಿತು
ಮುಖ್ಯೋಪಾಧ್ಯಾಯರು ದಿನದ ಮಹತ್ವವನ್ನು  ವಿದ್ಯಾರ್ಥಿಗಳಿಗೆ ತಿಳಿಸಿದರು.ಬಳಿಕ ಜನಜಾಗ್ರತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. "ಬೀಳದಿರಿ ವ್ಯಸನದ  ಬಲೆಯೊಳಗೆ", "ಮಾದಕ ದ್ರವ್ಯ ಸೇವನೆಯಿಂದ ಮನುಕುಲನಾಶ", "ಮಧ್ಯಸೇವನೆಯ ಗಮ್ಮತ್ತು ಆಗುವುದು ಜೀವಕ್ಕೆ ಆಪತ್ತು "......ಘೋಷಣೆಗಳನ್ನು ಕೂಗುತ್ತಾ ಮಾದಕ ದ್ರವ್ಯಗಳ ವಿರುದ್ಧ ಫಲಕಗಳನ್ನು ಪ್ರದರ್ಶಿಸುತ್ತಾ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ಜಾಥಾ ನಡೆಸಿದರು.

Saturday 19 July 2014

ವಾಚನಾ ದಿನಾಚರಣೆ

ವಾಚನಾ ದಿನಾಚರಣೆ 
ವಿದ್ಯಾರ್ಥಿಗಳು ತಮ್ಮ  ಜೀವನದ ಯಾವುದೇ ಕನಸನ್ನು ನನಸಾಗಿಸಬೇಕಾದರೂ ಓದು ಅನ್ನುವುದು ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪಿ.ಎನ್.ಪಣಿಕ್ಕರ್ ಸ್ಪರಣಾರ್ಥವಾಗಿ ನಡೆಯುವ ವಾಚನಾ ಸಪ್ತಾಹವು ನಮ್ಮ 
ಶಾಲೆಯಲ್ಲಿ ಜೂನ್ 19 ರಿ ದ 25ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.


 -,

ಪ್ರವೇಶೋತ್ಸವ -2014-15

ಪ್ರವೇಶೋತ್ಸವ -2014-15


      ಶಾಲೆಯೆಂಬುದು ಜ್ಞಾನದ ಬೆಳಕನ್ನು ಬೆಳಗಿಸುವ ವಿದ್ಯಾದೇಗುಲ. ಇದರಂತೆ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ದಿನಾಂಕ 2-6-2014 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯಿತು. ನವಾಗತರನ್ನು ಆಕರ್ಷವಾದ ಘೋಷಣಾ ವಾಕ್ಯಗಳನ್ನು ಕೂಗುತ್ತಾ ವೈಭವದ ಮೆರವಣಿಗೆಯೊಂದಗೆ  ಶಾಲಾ ಸಭಾಂಗಣಕ್ಕೆ ಕರೆ ತರಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಪ್ರಿ ಟೆಸ್ಟ್

ಪ್ರಿ ಟೆಸ್ಟ್

ತಾ.18.6.2014 ರಂದು ನಮ್ಮ ಶಾಲೆಯಲ್ಲಿ 5 ರಿಂದ 7ನೇ ತರಗತಿಯ ವರೆಗಿನ ಕಲಿಕೆಯಲ್ಲಿ ಹಿಂದುಳಿದಿರುವಂತಹ ಮಕ್ಕಳನ್ನು ಆರಿಸಲಿರುವ ಪ್ರಿ ಟೆಸ್ಟ್ ಜರಗಿತು. ನೀಡಿದ ಎಲ್ಲಾ ಚಟುವಟಿಕೆಯಲ್ಲಿ ಡಿ  ಗ್ರೇಡ್ ಲಭಿಸಿದ(ಕಲಿಕೆಯಲ್ಲಿ ಹಿಂದುಳಿದ) ಮಕ್ಕಳ ಲಿಸ್ಟನ್ನು ಉಪಜಿಲ್ಲಾ ವಿದ್ಯಾದಿಕಾರಿ ಕಚೇರಿಗೆ ಕಳುಹಿಸಲಾಯಿತು.