Sunday 28 September 2014

ಸಾಕ್ಷರ ಶಿಬಿರ

ಸಾಕ್ಷರ ನವೋಲ್ಲಾಸ ಶಿಬಿರ 2014 

ನಮ್ಮ ಶಾಲೆಯಲ್ಲಿ ಸಾಕ್ಷರ ಶಿಬಿರವನ್ನು 27-9-2014 ರಂದು ನಡೆಸಲಾಯಿತು. ಸಾಕ್ಷರ ತರಗತಿಯಲ್ಲಿರುವ ಕೆಲವೇ ಮಕ್ಕಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಮಕ್ಕಳು ಭಾಗವಹಿಸಿರುವರು.ಮಕ್ಕಳಿಗೆ ಶಿಬಿರವು ಬಹಳ ಇಷ್ಟವಾಯಿತು.ಇನ್ನೂ ಇಂತಹ ಶಿಬಿರದ ಅಗತ್ಯವಿದೆ ಎಂಬುದನ್ನು ಮಕ್ಕಳ ಫೀಡ್ ಬ್ಯಾಕ್ ನಿಂದ ತಿಳಿಯಲಾಯಿತು.  ಶಿಬಿರವನ್ನು ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು.   ಓದುವಿಕೆ ಬರವಣಿಗೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳು ಈ ಕಾರ್ಯಕ್ರಮದಲ್ಲಿ ಒಳಗೊಂಡಿತ್ತು. ಮಕ್ಕಳ ಮಾತೃಭಾಷಾ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆದ ಈ ಶಿಬಿರವು ಯಶಸ್ವಿಯಾಗಿ ನಡೆಯಿತು.

science quize

science quize

ಯು.ಪಿ.ವಿಭಾಗದ ಶಾಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು 25-9-2014 ರಂದು ನಡೆಯಿತು. ವಿಜ್ಞಾನ ಕ್ಲಬ್ ಕನ್ವೀನರ್ ಶ್ರೀ ರಾಜೇಶ್ ನೇತೃತ್ವವಹಿಸಿದರು. ಇಬ್ರಾಹಿಂ ಕಲೀಲ್ ಪ್ರಥಮ ಸ್ಥಾನವನ್ನೂ ಆಯಿಶತುಲ್ ಹಫೀಝ ದ್ವಿತೀಯ ಸ್ಥಾನವನ್ನೂ  ಗಳಿಸಿದರು.

ಮ್ಯಾಜಿಕ್ ಶೋ

ಮ್ಯಾಜಿಕ್ ಶೋ

 

ಮಂಗಳಯಾನ


        ಮಂಗಳಯಾನ ...ವೀಡಿಯೋ ಪ್ರದರ್ಶನ
 

ಹಿಂದಿ ವಾರಾಚರಣೆ


ಹಿಂದಿ ವಾರಾಚರಣೆ
ನಮ್ಮ ಶಾಲೆಯಲ್ಲಿ ಹಿಂದಿ ವಾರಾಚರಣೆಯನ್ನು 22-9-2014 ರಿಂದ 26-9-2014 ರ ವರೆಗೆ ಆಚರಿಸಲು ತೀರ್ಮಾನಿಸಲಾಯಿತು.ಹಿಂದಿ ಕ್ಲಬ್ ಕನ್ವೀನರ್ ಶ್ರೀಮತಿ.ಜೋಶ್ನ ಕಾರ್ಯಕ್ರಮವನ್ನು ನಿರೂಪಿಸಿದರು.ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು.


ABOUT US



 
ನಮ್ಮ ಶಾಲೆ
ಸಮಾಜದಲ್ಲಿ ಶಾಲೆಗೆ ಪ್ರಮುಖ ಸ್ಥಾನವಿದೆ.. "ಸಮುದಾಯದತ್ತ ಶಾಲೆ'
ಎನ್ನುವ ಘೋಷಣಾ ವಾಕ್ಯದೊಂದಿಗೆ ಕಾರ್ಯವೆಸಗುವ ಶಾಲೆಯಾಗಿದೆ ಜಿ. ಯು. ಪಿ. ಶಾಲೆ ಉದ್ಯಾವರ.
ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ತವರೂರಿನಲ್ಲಿ, ಷಷ್ಟಿ ದೇವಸ್ಥಾನವೆಂದೇ ಕೇರಳದ ಉದ್ದಗಲದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಜೇಶ್ವರ ಶ್ರೀ ಅನಂತಪದ್ಮನಾಭ ದೇವಸ್ಥಾನ ದಕ್ಷಿಣ ಭಾಗದಲ್ಲಿಯೂ,ಹಿಂದು ಮುಸ್ಲಿಂ ಭಾಂದವ್ಯವನ್ನು ಸಾರುವ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಉತ್ತರ ಭಾಗದಲ್ಯಿಯೂ ನೆಲೆಸಿಕೊಂಡು ಪೂರ್ವದಲ್ಲಿ ಬಡಾಜೆ ಶ್ರೀ ಮಹಾಲಿಂಗೇಶ್ವರನ ತವರೂರಗಿರುವ ಈ ಪ್ರದೇಶ ಪಶ್ಚಿಮ ಭಾಗದಲ್ಲಿ ವಿಶಾಲವಾಗಿ ಅರಬೀ ಸಮುದ್ರದ ಕಿನಾರೆಯನ್ನು ಹೊಂದಿರುವ ಸುಂದರವಾದ ತುಳುನಾಡಿನಲ್ಲಿ ನಮ್ಮ ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರವು ನೆಲೆಸಿದೆ.

ಹಿನ್ನಲೆ

ಮಂಜೇಶ್ವರ ಪಂಚಾಯತಿಗೆ ಒಳಪಟ್ಟ ಮಂಜೇಶ್ವರ ಬ್ಲ್ಲೋಕ್ ಆಪೀಸಿನ ಸಮೀಪ ಈ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಾಗಿ ಸ್ಥಾಪನೆಯಾಗಿತ್ತು. ಬಳಿಕ ಮಂಜೇಶ್ವರ ಗೇಟಿನ ಸಮೀಪದ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಸ್ಥಾಪನೆಗೊಂಡ ನಿಖರವಾದ ವರ್ಷ ತಿಳಿಯದಿದ್ದರೂ ಕೆಲವೊಂದು ಮಾಹಿತಿ ಪ್ರಕಾರ 1901 ರಲ್ಲಿ ಸ್ಥಾಪನೆಯಾಗಿದೆ ಯೆಂದು ತಿಳಿಯಬಹುದು. 1980 ರಲ್ಲಿ ಹೆತ್ತವರ ಹಾಗೂ ಊರವರ ಸತತ ಪ್ರಯತ್ನದ ಫಲವಾಗಿ ಭಡ್ತಿಗೊಂಡು ಯು.ಪಿ.ಶಾಲೆಯಾಗಿ ಪ್ರಸ್ತುತ ಮಂಜೇಶ್ವರ ಗುಡ್ಡೆಯಲ್ಲಿ ಕಾರ್ಯವೆಸಗುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಂಜೇಶ್ವರ ಗೇಟಿನ ಬಳಿಯಿಂದ ವರ್ಗಾವಣೆಗೊಂಡಿತು. ಅದುವರೆಗೆ ಗೇಟಿನ ಬಳಿ ಒಂದರಿಂದ ಏಳನೇ ತರಗತಿ ವರೆಗೆ ಇದ್ದ ಶಾಲೆಯು ಬಳಿಕ ಒಂದರಿಂದ ನಾಲ್ಕರ ವರೆಗೆ ಗೇಟಿನ ಸಮೀಪವೂ ಐದರಿಂದ ಏಳರವರೆಗೆ ಉದ್ಯಾವರ ಗುಡ್ಡೆಯಲ್ಲೂ ಕಾರ್ಯಾಚರಿಸಲು ತೊಡಗಿತು. ಆಗ ಶ್ರೀ. ಶಂಕರನಾರಾಯಣ ನಾವಡರು ಈ ಎರಡೂ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದರು. ಒಂದೇ ಶಾಲೆಯಾಗಿ ಹತ್ತು ವರುಷಗಳ ಕಾಲ ಮುಂದುವರಿಯಿತು. ಬಳಿಕ 1990 ರಲ್ಲಿ ಈ ಶಾಲೆಯು ಬೇರ್ಪಡೆಗೊಂಡಿತು. ಆ ವೇಳೆಯಲ್ಲಿ ಶ್ರೀಮತಿ. ಪದ್ಮಿನಿಯವರು ಮುಖ್ಯೋಪಾಧ್ಯಾಯಿನಿಯಾಗಿದ್ದರು. ಬಳಿಕ 1998.99 ರ ಕಾಲಾವಧಿಯಲ್ಲಿ ಶ್ರೀ. ವಾಸುದೇವ ಶೆಟ್ಟಿ, , 2001.2003 ರ ಕಾಲಾವಧಿಯಲ್ಲಿ ಶ್ರೀ. ಪ್ರಭಾಕರ ಅಗ್ಗಿತ್ತಾಯ, 2004.2008 ರ ಸಮಯದಲ್ಲಿ ಆನಂದ ಮೂಲ್ಯ, 2009.2011 ರ ಕಾಲಾವಧಿಯಲ್ಲಿ ಶ್ರೀಮತಿ. ಶಾಂತಕುಮಾರಿ ಮುಂತಾದವರು ಕಾರ್ಯನಿರ್ವಹಿಸಿರುವರು. ಇದೀಗ 2012 ರಿಂದ ಶ್ರೀ. ಪಿ. ಎಸ್. ಪ್ರಭಾಕರರವರು ಈ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಪ್ರಶಾಂತವಾದ ವಾತಾವರಣದಲ್ಲಿ ಸುಮಾರು ಮೂರು ಎಕರೆ ಸ್ಥಳವನ್ನು ಹೊಂದಿರುವ ಸುಸಜ್ಜಿತವಾದ ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ

 ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5 ಅಧ್
ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5  

ಅಧ್ಯಾಪಕರು,ಓರ್ವ ಹಿಂದಿ ಅಧ್ಯಾಪಕರು ಹಾಗೂ ಓರ್ವ ಆಫೀಸ್ ಎಟೆಂಡರ್ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
.

Tuesday 16 September 2014

ಓಝೋನ್ ದಿನಾಚರಣೆಃ 16-9-2014

ಓಝೋನ್ ದಿನಾಚರಣೆಃ 16-9-2014

ಓಝೋನ್ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಓಝೋನ್ ಪದರಿನ ಬಗ್ಗೆ , ಪದರು ಉಂಟಾಗುವುದು ಹೇಗೆ , ಅದರ ರಕ್ಷಣೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ವಿಜ್ಞಾನ ಅಧ್ಯಾಪಕ ರಾಜೇಶ್ ರವರು ವಿವರಿಸಿದರು. ಇದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ವಿವಿಧ ಪ್ಲಕ್ ಕಾರ್ಡುಗಳನ್ನು ಬರೆದು ಪ್ರದರ್ಶಿಸಿದರು.

Tuesday 9 September 2014

ONAM CELEBRATION

ONAM CELEBRATION

ಓಣಂ ಹಬ್ಬವನ್ನು  ನಮ್ಮ  ಶಾಲೆಯಲ್ಲಿ ಬಹಳ  ಉತ್ತಮ ರೀತಿಯಲ್ಲಿ  ಆಚರಿಸಲಾಯಿತು. ತರಗತಿ ಮಟ್ಟದಲ್ಲಿ ಪೂಕಳ ಸ್ಪರ್ದೆಯನ್ನು ನಡೆಸಲಾಯಿತು .. ಬಳಿಕ  ಎಲ್ಲಾ  ತರಗತಿಯ ಮಕ್ಕಳಿಗೆ ಪ್ರತ್ಯೇಕ ಆಟೋಟ  ಸ್ಪರ್ಧೆಗಳನ್ನು ನಡೆಸಲಾಯಿತು ಹಾಗು ಗುಂಪು  ಸ್ಪರ್ಧೆಗಳನ್ನು ನಡೆಸಲಾಯಿತು . ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು .   ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಬಳಿಕ ಶಾಲೆಯಲ್ಲಿ  ಓಣಂ ಸದ್ಯ ನಡೆಯಿತು . ಎಲ್ಲರೂ ಪಾಯಸದ ಊಟವನ್ನು ಸವಿದರು .

Friday 5 September 2014

TEACHERS DAY CELEBRATION

ACTIVITY CALENDER-SEPTEMBER


ACTIVITY CALENDER-SEPTEMBER-2014


DATE

DAYS


ACIVITY


Teacher-in-charge
1
ಕಾಲು ವಾರ್ಷಿಕ ಪರೀಕ್ಷೆ ಮೌಲ್ಯಮಾಪನ ಪಿ.ಎಮ್.
2
'' '' ''
3
'' '' ''
4
'' '' ''
5
ಅಧ್ಯಾಪಕ ದಿನಾಚರಣೆ , ಓಣಂ ದಿನಾಚರಣೆ ಗುರು ವಂದನಾ ಕಾರ್ಯಕ್ರಮ,
ದಿನದ ಪ್ರಾಧಾನ್ಯದ ಕುರಿತು ಭಾಷಣ
ಹೂವಿನ ರಂಗೋಲಿ, ಆಟೋಟ ಸ್ವರ್ಧೆಗಳು,ಓಣ ಸಧ್ಯ
.ಕೆ.
ಪಿ.ಎಮ್.
6-15
ಓಣಂ ರಜೆ



16
ಶಾಲೆ ಪುನರಾರಂಭ, ಎಸ್.ಆರ್.ಜಿ 
ಓಝೋನ್ ದಿನ
ಮೌಲ್ಯಮಾಪನದ ಬಗ್ಗೆ
ದಿನದ ಮಹತ್ವದ ಬಗ್ಗೆ ಮಾಹಿತಿ,ಮಕ್ಕಳಿಂದ ಪ್ಲಕ್ ಕಾರ್ಡ್ ತಯಾರಿ
.ಕೆ.
ರಾಜೇಶ್ ಕುಮಾರ್.ಯು.
18
ಉಳಿದ ಪರೀಕ್ಷೆಗಳ ಆರಂಭ

ಪಿ.ಎಮ್
22 - 26
ಹಿಂದಿ ವಾರಾಚರಣೆ



ಜೋಶ್ನ

ACTIVITY CALENDER-AUGUST


ACTIVITY CALENDER-AUGUST-2014


DATE
DAYS
ACTIVITY
Teacher-in-charge
1
ಎಸ್.ಆರ್.ಜಿ.
ಪಾಠ ಯೋಜನೆ,ಚರ್ಚೆ
.ಕೆ.
6
ಹಿರೋಶಿಮ ದಿನ,ಕ್ಲಬ್ ಇನೋಗರೇಶನ್
ಸಿ.ಡಿ.ಪ್ರದರ್ಶನ,ದಿನದ ಮಹತ್ವದ ಕುರಿತು ಭಾಷಣ,ಯುದ್ಧ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ,
ಸಮಾಜ ಕ್ಲಬ್, ಇಂಗ್ಲೀಷ್ ಕ್ಲಬ್, ಮ್ಯಾಸ್ ಕ್ಲಬ್, ಸಯನ್ಸ್ ಕ್ಲಬ್,ವರ್ಕ್ ಎಕ್ಸ್. ಕ್ಲಬ್ ಇತ್ಯಾದಿ ಕ್ಲಬ್ ಗಳ ಉದ್ಘಾಟನೆ
ಪಿ.ಎಮ್. ಎಸ್.ಪಿ.
ಕ್ಲಬ್ ಗಳ ಕನ್ವೀನರ್ ಗಳು
8
ಎಸ್.ಆರ್.ಜಿ.
ಸ್ವಾತಂತ್ರ್ಯ ದಿನ ಆಚರಣೆ ಬಗ್ಗೆ ಚರ್ಚೆ
.ಕೆ.
9
ನಾಗಸಾಕಿ ದಿನಾಚರಣೆ
ಕ್ವಿಟ್ ಇಂಡಿಯಾ ದಿನ
ಘೋಷಣಾ ವಾಕ್ಯ ರಚನೆ ಮಕ್ಕಳಿಂದ


ಆರ್.ಕೆ.ಯು.
13
ಎಸ್ ಆರ್.ಜಿ.,ಸ್ಪರ್ಧೆಗಳು
ಪಾಠ ಯೋಜನೆ, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸ್ವರ್ಧೆಗಳು
ಎಸ್.ಪಿ.
15
ಸ್ವಾತಂತ್ರ್ಯ ದಿನಾಚರಣೆ
ಧ್ವಜಾರೋಹಣೆ, ಸಭಾ ಕಾರ್ಯಕ್ರಮ
ಬಹುಮಾನ ವಿತರಣೆ,ಭಾಷಣ, ಮನೋರಂಜನಾ ಕಾರ್ಯಕ್ರಮ
.ಕೆ.
22
ಶಾಲಾ ಚುನಾವಣೆ,ಕರಕುಶಲ ದಿನಾಚರಣೆ, ವಾರ್ಷಿಕ ಮಹಾಸಭೆ
ಸ್ಕೂಲ್ ಪಾರ್ಲಿಮೆಂಟ್,
ಎಸ್.ಪಿ.ಎಲ್.ನ ಆಯ್ಕೆ,ಕ್ಲಾಸ್ ಲೀಡರ್ ಆಯ್ಕೆ ,
ಕರಕುಶಲ ಸ್ವರ್ಧೆ, ಪಿ.ಟಿ.. ಅಧ್ಯಕ್ಷರ ಆಯ್ಕೆ, , ನೂತನ ಕಮಿಟಿ


ಆರ್.ಕೆ.ಯು.
.ಕೆ.
ಎಚ್.ಎಮ್.
28
ಕಾಲುವರ್ಷಿಕ ಮೌಲ್ಯಮಾಪನ
ಎಲ್ಲಾ ತರಗತಿಗಳಿಗೆ ಮೌಲ್ಯಮಾಪನ
ಪಿ.ಎಮ್.

ACTIVITY CALENDER-JULY


ACTIVITY CALENDER-JULY 2014
DATE
DAYS

ACTIVITY
Teacher-in-charge
1
ಡಾಕ್ಟರ್ ದಿನಾಚರಣೆ
ವನಮಹೋತ್ಸವ ದಿನಾರಂಭ
ಆರೋಗ್ಯ ತಪಾಸಣೆ, ಕ್ಲಾಸ್
ಪಂಚಾಯತು ವೈದ್ಯರಿಂದ
ಹೆಲ್ತ್ ಕ್ಲಬ್ ಕನ್ವೀನರ್ ಎ.ಕೆ.
2
ಎಸ್.ಆರ್.ಜಿ. ''
ಪರಿಸರ ಶುಚೀಕರಣ
''
3
''
ಗಿಡಗಳನ್ನು ಸಂಗ್ರಹಿಸುವುದು
''
4
''
ಮಣ್ಣು ಹದಗೊಲಿಸುವುದು
''
5
''


6
''


7
''
ಶಾಲಾ ಪರಿಸರದಲ್ಲಿ ನೆಡುವುದು
ಇಕೊ ಕ್ಲಬ್ ಕನ್ವೀನರ್ ಆರ್.ಕೆ
11
ಲೋಕ ಜನಸಂಖ್ಯಾ ದಿನ,
ಎಸ್.ಆರ್.ಜಿ.
ಜನಸಂಖ್ಯಾ ಹೆಚ್ಚಳದಿಂದ ಕಷ್ಟವೊ.....
ಸುಖವೊ....ಚರ್ಚೆ,ಸಿ.ಡಿ.ಪ್ರದರ್ಶನ,ಭಾಷಣ
ಸಮಾಜ ವಿಜ್ಞಾನ
ಕ್ಲಬ್ ಕನ್ವೀನರ್ ಎಸ್.ಪಿ.
12
ಜನಗಣತಿ ವಾರಾಚರಣೆ


13
''


14
''
ಜನಗಣತಿ/ಜನಸಂಖ್ಯಾ ಕ್ವಿಜ್,
ಜೆ ಯು.
ಪಿ..ಎಮ್.
15
''
ಸೆಮಿನಾರ್ ಮಂಡನೆ
.ಕೆ.
16
''
ಪೋಸ್ಟರ್ ರಚನೆ, ,ಪ್ರದರ್ಶನ
ಆರ್.ಕೆ
17
''
ಸಮಾರೋಪ

18
ಎಸ್. ಆರ್.ಜಿ.
ಚರ್ಚೆ, ಪ್ಲಾನಿಂಗ್
.ಕೆ.
21
ಚಾಂದ್ರ ದಿನ
ಸಿ.ಡಿ. ಪ್ರದರ್ಶನ, ಮೂನ್ ವಾಕ್
ಆರ್.ಕೆ.
25
ಎಸ್.ಆರ್.ಜಿ
ಪಾಠ ಯೋಜನೆ,ಚರ್ಚೆ
.ಕೆ.
30
ಸಿ.ಪಿ.ಟಿ..
ಸಮ ವಸ್ತ್ರ,ಶಿಸ್ತು,ಸಮಯ ಪಾಲನೆ
ಎಲ್ಲಾ ಅಧ್ಯಾಪಕರು
31
ಪ್ರೇಮ್ ಚಂದ್ ಜನ್ಮದಿನ
ಸೆಮಿನಾರ್
ಜೆ.ಯು.





Wednesday 3 September 2014


ACTIVITY CALENDER-2014-15

JUNE

DATE
DAYS
ACTIVITY
Teacher-in-Charge
2
ಪ್ರವೇಶೋತ್ಸವ
ಎಸ್ ಆರ್ ಜಿ
ನವಾಗತರಿಗೆ ಸ್ವಾಗತ, ಸಭಾ ಕಾರ್ಯಕ್ರಮ, ಮೆರವಣಿಗೆ, ಪದ್ಯ, ಆಟ, ಸಿಹಿ ತಿಂಡಿ ವಿತರಣೆ
ಎಲ್ಲಾ ಅಧ್ಯಾಪಕರು
5
ಪರಿಸರ ದಿನಾಚರಣೆ
ಗಿಡ ವಿತರಣೆ, ದಿನದ ಮಹತ್ವದ ಕುರಿತು ಭಾಷಣ, ಘೋಷಣಾ ವಾಕ್ಯ ರಚನೆ
ಆರ್ .ಕೆ .ಯು,
9
ಎಸ್.ಆರ್.ಜಿ.
ಡ್ಯೂಟಿ ಹಂಚಿಕೆ
ಎಲ್ಲಾ ಅಧ್ಯಾಪಕರು
16
ಸ್ಪೆಶಲ್ ಎಸ್.ಆರ್.ಜಿ.
ಸಾಕ್ಷರ ತರಬೇತಿಯ ಬಗ್ಗೆ ಸೂಚನೆ
,,
18
ಮೌಲ್ಯ ನಿರ್ಣಯ ತರಗತಿ ಮಟ್ಟದಲ್ಲಿ
೪ ಚಟುವಟಿಕೆ, ಡಿ ಗ್ರೇಡ್ ಸಿಕ್ಕಿಗವರ ಪಟ್ಟಿ ತಯಾರಿ
,,
19
ವಾಚನಾ ವಾರಾಚರಣೆ
ಲೈಬ್ರರಿ ಪುಸ್ತಕ ವಿತರಣೆ
ಜೋಶ್ನ
20
,,
ಓದಿನ ಸ್ವರ್ಧೆ

ಆಶಾಲತಾ
21
,,
ರಸ ಪ್ರಶ್ನೆ
ಪದ್ಮಾವತಿ
22
,,


23
,,


24
,,
ಆಶು ಭಾಷಣ ಸ್ಪರ್ಧೆ
ಸಾಧನಾ
25
,,
ಸಮಾರೋಪ ಸಮಾರಂಭ
ರಾಜೇಶ್
30
ಎಸ್.ಆರ್.ಜಿ.
ಕಲಿಕೆಯ ಬಗ್ಗೆ, ಸಮಯ ಪಾಲನೆ,ಶಿಸ್ತು,ಸಮವಸ್ತ್ರಧಾರಣೆ
ಎಲ್ಲಾ ಅಧ್ಯಾಪಕರು



Tuesday 2 September 2014

HAPPY ONAM

ಓಣಂ ಹಬ್ಬದ ಶುಭಾಶಯಗಳು