Friday 21 November 2014

ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಶಾಲಾ ದಾರಿಯಲ್ಲಿ ಬಿದ್ದು ಸಿಕ್ಕಿದ ಕಿವಿಯ ಓಲೆಯನ್ನು ಮುಖ್ಯೋಪಾಧ್ಯಾಯರಿಗೆ ನೀಡಿ ಸಂಸೀನ ಪ್ರಶಂಸೆಗೆ ಪಾತ್ರಳಾದಳು. ಅವಳ ಪ್ರಾಮಾಣಿಕತನವನ್ನು ಕಂಡು ಮೆಚ್ಚಿದ ಪಿ.ಟಿ.ಎ. ಅಧ್ಯಕ್ಷರು  ಬಹುಮಾನವನ್ನು ನೀಡಿ ಅವಳನ್ನು ಅಬಿನಂದಿಸಿದರು. ಚಿನ್ನವನ್ನು ಅದರ ಹಕ್ಕುದಾರಳಾದ ಯಕ್ಷಿತಳಿಗೆ ಅಸೆಂಬ್ಲಿಯಲ್ಲಿ ಹಸ್ತಾಂತರಿಸಲಾಯಿತು.

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು

Thursday 20 November 2014

ರಕ್ಷಕರ ಸಮ್ಮೇಳನ

ರಕ್ಷಕರ ಸಮ್ಮೇಳನ

ನಮ್ಮ ಶಾಲೆಯಲ್ಲಿ 14-11-2014ರಂದು ರಕ್ಷಕರ ಸಮ್ಮೇಳನವು ಜರಗಿತು. ಕಾರ್ಯಕ್ರಮವನ್ನು ಹೈಸ್ಕೂಲ್ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು. ಯು.ಪಿ. ಮುಖ್ಯೋಪಾಧ್ಯಾಯರು ಶುಭವನ್ನು ಹಾರೈಸಿದರು. ಆಶಾಲತಾ ಟೀಚರ್ ರಕ್ಷಕರಿಗೆ ಸಮ್ಮೇಳನದ ಕುರಿತು ಮಾತನಾಡಿದರು.  ಮಕ್ಕಳ ಹಾರೈಕೆ ಯಾವ ರೀತಿಯಲ್ಲಿ ಮತ್ತು ಹೇಗೆ ಎಂಬುದರ ಕುರಿತು ವಿವರಿಸಿದರು.ಕಾರ್ಯಕ್ರಮವನ್ನು ಪದ್ಮಾವತಿ ಟೀಚರ್ ಸ್ವಾಗತಿಸಿ ರಾಜೇಶ್ ಕುಮಾರ್ ವಂದಿಸಿದರು.

Wednesday 12 November 2014

ಶಾಲಾ ಮಟ್ಟದ ಕಲೋತ್ಸವ


ಶಾಲಾ ಮಟ್ಟದ ಕಲೋತ್ಸವ


ನಾಲ್ಕನೇ ಹಂತದ ಮೌಲ್ಯಮಾಪನ


ನಾಲ್ಕನೇ ಹಂತದ ಮೌಲ್ಯಮಾಪನ

ನಾಲ್ಕನೇ ಹಂತದ ಮೌಲ್ಯಮಾಪನವು ಶಾಲೆಯಲ್ಲಿ ಜರಗಿತು.

Tuesday 4 November 2014

ಸದ್ಗಮಯ



ಸದ್ಗಮಯ ಕಾರ್ಯಕ್ರಮ
29-10-2014 ರಂದು ನಮ್ಮ ಶಾಲೆಯಲ್ಲಿ ಸರಕಾರಿ ಹೋಮಿಯೋ ಆಸ್ಪತ್ರೆಯ ವತಿಯಿಂದ ಸದ್ಗಮಯವೆಂಬ ಕಾರ್ಯಕ್ರಮವು ಜರಗಿತು.ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಸೆಮೀರರವರು ಉದ್ಘಾಟನೆ ಮಾಡಿದರು. ಅಧ್ಯಕ್ಷ ಸ್ಧಾನವನ್ನು ಮುಖ್ಯೋಪಾಧ್ಯಯರು ವಹಿಸಿದರು. ಸದ್ಗಮಯ ಕಾರ್ಯಕ್ರಮದ ಕುರಿತು ಡಾಕ್ಟರ್ ಅಂಬಿಳಿಯವರು ವಿವರಿಸಿದರು. ಸಂಪನ್ಮೂಲರಾದ ಡಾಕ್ಟರ್ ಪ್ರವೀಣ್ ರಾಜ್ ತರಬೇತಿಯನ್ನು ನಡೆಸಿ ಕೊಟ್ಟರು. ರಕ್ಷಕರು ಮಕ್ಕಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂಬುದರ ಕುರಿತು ಅವರು ವಿವರಿಸಿದರು. ಹೆಣ್ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದರು. ರಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಕೆಲವೊಂದು ಔಷಧಿಗಳನ್ನು ಉಚಿತವಾಗಿ ನೀಡಿದರು. ಮಕ್ಕಳ ಭವಿಷ್ಯದ ಬಗ್ಗೆ ಹೇಗೆ ಮುಂಜಾಗ್ರತೆ ವಹಿಸಬೇಕೆಂಬುದರ ಬಗ್ಗೆ ರಕ್ಷಕರಿಗೆ ಮನದಟ್ಟು ಮಾಡಿದರು.