CELEBRATIONS

ಪ್ರವೇಶೋತ್ಸವ -2014-15


      ಶಾಲೆಯೆಂಬುದು ಜ್ಞಾನದ ಬೆಳಕನ್ನು ಬೆಳಗಿಸುವ ವಿದ್ಯಾದೇಗುಲ. ಇದರಂತೆ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ನಮ್ಮ ಶಾಲೆಯಲ್ಲಿ ದಿನಾಂಕ 2-6-2014 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯಿತು. ನವಾಗತರನ್ನು ಆಕರ್ಷವಾದ ಘೋಷಣಾ ವಾಕ್ಯಗಳನ್ನು ಕೂಗುತ್ತಾ ವೈಭವದ ಮೆರವಣಿಗೆಯೊಂದಗೆ  ಶಾಲಾ ಸಭಾಂಗಣಕ್ಕೆ ಕರೆ ತರಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪಿ.ಟಿ.ಎ. ಅಧ್ಯಕ್ಷರಾದ ಶ್ರೀ. ಯೂಸಫರವರು ವಹಿಸಿದರು. ಮಂಜೇಶ್ನರ ಗ್ರಾಮಪಂಚಾಯತು  ಸದಸ್ಯ ಶ್ರೀ. ಹರಿಶ್ಚಂದ್ರ ಮಂಜೇಶ್ವರರವರು ನವಾಗತರು ಶಾಲೆಯ ಕೀರ್ತಿಯನ್ನು ಬೆಳಗಲಿ ಎಂದು ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಹೇಳಿ ಶುಭವನ್ನು ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು ನವಾಗತರಿಗೆ ಶುಭವನ್ನು ಹಾರೈಸುತ್ತಾ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಮಟ್ಟಕ್ಕೆ ತಲುಪಬೇಕೆಂದೂ ಶಾಲೆಯ ಕೀರ್ತಿಯನ್ನು ಬೆಳಗಿಸಬೇಕೆಂದೂ ಹೇಳಿದರು. ಶಾಲಾ ಅಧ್ಯಾಪಕರಾದ ರಾಜೇಶಕುಮಾರ್ ರಾಜ್ಯ ಶಿಕ್ಷಣ ಸಚಿವರ ಸಂದೇಶವನ್ನು ವಾಚಿಸಿದರು. ಅಧ್ಯಾಪಕರೆಲ್ಲರು ಎಲ್ಲಾ ಮಕ್ಕಳಿಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ಕಲಿಸುವ ಉದ್ದೇಶವನ್ನಿಟ್ಟುಕ್ಕೊಂಡು  ಕನ್ನಡವೇ ನಮ್ಮ ಭಾಷೆ, ಕಲಿಯುವ ಕನ್ನಡ ಭಾಷೆ ಎಂಬ ಘೋಷಣೆಯನ್ನು ಈ ವರ್ಷದ ಪ್ರತಿಜ್ಞೆಯಾಗಿ ಸ್ವೀಕರಿಸಿದರು. ಬಳಿಕ ಶಾಲಾ ಶಿಕ್ಷಕಿ ಆಶಾಲತರವರು ಪ್ರವೇಶೋತ್ಸವ ಗೀತೆಯನ್ನು ಹಾಡಿ ಮಕ್ಕಳಿಂದ ಹಾಡಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕುಗಳನ್ನು ಬರೆದ ವಿವಿಧ ಫ್ಲಕ್ ಕಾರ್ಡುಗಳನ್ನು  ಪ್ರದರ್ಶಿಸುತ್ತಾ ಮಂಜೇಶ್ವರ ಜಂಕ್ಷನ್ ವರೆಗೆ ಮೆರವಣಿಗೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿತಿಂಡಿ ಮತ್ತು ಪಾನೀಯವನ್ನು ಹಂಚಲಾಯಿತು. ಹಾಡುಗಳು ಮತ್ತು ಆಟಗಳ ಮೂಲಕ ನವಾಗತರನ್ನು ರಂಜಿಸುತ್ತಾ ಮುಂದುವರಿದ ಕಾರ್ಯ ಕ್ರಮವು ಮಧ್ಯಾಹ್ನ  1.00 ಗಂಟೆಗೆ ಮುಕ್ತಾಯಗೊಂಡಿತು. 



ನವಾಗತರಿಗೆ  ಸ್ವಾಗತ -ಅಧ್ಯಾಪಕಿ  ಪದ್ಮಾವತಿ ಯವರಿಂದ 

ರಾಜ್ಯ  ಶಿಕ್ಷಣ  ಸಚಿವರ ಸಂದೇಶ  -ಅದ್ಯಾಪಕ ರಾಜೇಶಕುಮಾರ್ ರವರಿಂದ 

ಪ್ರವೇಶೋತ್ಸವ  ಗೀತೆ  


ಗಾಂಧಿ ಜಯಂತಿ

ನನ್ನ ಜೀವನವೇ ನನ್ನ ಸಂದೇಶ ವೆಂದು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ನೇ ತಾರೀಕಿನಂದು ವಿಶೇಷವಾದ ರೀತಿಯಲ್ಲಿ ನಡಸಲಾಯಿತು. ಬೆಳಗ್ಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಲಾ ಮುಖೋಪಾಧ್ಯಾಯರು ಪುಷ್ಪ ಹಾರ ಹಾಕಿ ರಾಷ್ಟ್ರ ಪಿತನ ಸ್ಮರಣೆಯನ್ನು ಮಾಡಿದರು. ಬಳಿಕ ಎಲ್ಲಾ ಅಧ್ಯಾಪಕರುಗಳಿಂದಲೂ ವಿದ್ಯಾರ್ಥಿಗಳಿಂದಲೂ ಗಾಂದೀಜಿಗೆ ಪುಷ್ಪಗಳಿಂದ ಅರ್ಚನೆ ನಡೆಯಿತು. ಬಳಿಕ ಗಾಂಧೀಜಿಯವರ ಭಾವಚಿತ್ರದ ಕೆಳಗೆ ಕುಳಿತು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಧರ್ಮ ಗ್ರಂಥಗಳ ಪಠನ, ಸಂದೇಶ ವಾಚನ, ಭಕ್ತಿ ಗೀತೆ ವಿದ್ಯಾರ್ಥಿಗಳಿಂದ ನಡೆಯಿತು.ಬಳಿಕ ಗೈಡ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಇದರಿಂದ ಮಕ್ಕಳಿಗೆ ಗಾಂಧೀಜಿಯವರ ಸರ್ವ ಧರ್ಮ ಸಮಾನ ತತ್ವವನ್ನು ಮಕ್ಕಳು ಕಂಡುಕೊಳ್ಳುವಂತಾಯಿತು. ಬಳಿಕ ಗಾಂಧೀಜಿಯವರ ಪ್ರೀತಿಯ ಭಜನೆಗಳನ್ನು ಕೇಳಿಸಲಾಯಿತು. ದಂಡಿಯಾತ್ರೆಯ ಸಿ.ಡಿ ಪ್ರದರ್ಶನ ಸಡೆಸಲಾಯಿತು.ಬಳಿಕ ಶಾಲಾ ಅಧ್ಯಾಪಿಕೆಯರಿಂದ ಗಾಂದೀಜಿಯ ಜೀವಚರಿತ್ರೆ ,ಸ್ವಾತಂತ್ರ್ಯ ಸಂಗ್ರಾಮ ಹಾಗು ಅಂತಿಮ ದಿನಗಳು ಎಂಬ ಮೂರು ಹಂತಗಳಾಗಿ ಭಾಷಣ ನಡೆಯಿತು. ಗಾಂದೀಜಿಯ ಸೂಕ್ತಿಯನ್ನು ಸಂಗ್ರಹಿಸಿ ಹೇಳಲಾಯಿತು. ಶಾಲಾ ಅಧ್ಯಾಪಿಕೆಯರಾದ ಆಶಾಲತಾ, ರಾಜೇಶ್, ಸಾಧನ, ಜೋಶ್ನ, ಪದ್ಮಾವತಿ ಉಪಸ್ಥಿತರಿದ್ದು ಯೋಗ್ಯ ಮಾರ್ಗ ದರ್ಶನ ನೀಡಿದರು. ಮಕ್ಕಳಿಗೆ ಕಲ್ಲು ಸಕ್ಕರೆ ಹಂಚಲಾಯಿತು.


No comments:

Post a Comment