Friday 24 October 2014

ಶಾಲಾ ಕ್ರೀಡೋತ್ಸವ

ಶಾಲಾ ಕ್ರೀಡೋತ್ಸವ

ನಮ್ಮ ಶಾಲಾ ಮಟ್ಟದ ಕ್ರೀಡೋತ್ಸವವು ತಾ. ೨೪.೧೦.೨೦೧೪ ರಂದು ನಮ್ಮ ಆಟದ ಮೃದಾನದಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೃದರು. ಜಿಲ್ಲಾ ಪಂಚಾಯತು ಮೆಂಬರ್ ಶ್ರೀಮತಿ . ಮಮತ ದಿವಾಕರ್ ಸ್ವರ್ಧಾಳುಗಳಿಂದ ಸೆಲ್ಯೂಟ್ ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.




Tuesday 21 October 2014

ಸಬ್ ಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಉದ್ಯಾವರ ಯು.ಪಿ.ಶಾಲೆಯ ವಿಜೇತರು

 ಸಬ್ ಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಉದ್ಯಾವರ ಯು.ಪಿ.ಶಾಲೆಯ ವಿಜೇತರು

ನಮ್ಮ ಶಾಲೆಯಿಂದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿದವರು ಮತ್ತು ವಿಜೇತರು

1.  AGARBATTI MAKING-- DEEKSHITH.R. --- First A Grade. 249 Points
2.  BAMBOO PRODUCT-AKASH CLINTON ALVARES-Third BGrade.183Points . 3.BEADS WORKS-- SHREYA.H-- Third AGrade. 212 Points
4. BOOK BINDING--MOHAMMAD ASIK--  SecondA Grade. 225 Points
5. COCCONUT PRODUCTS-- ROHAN CONEIRO.C-- Third A Grade. 210 points
6. EMBROIDERY-- AVISHA D'SOUZA-- B Grade. 187 Points
7. FABRIC  PAINTING-- YASHAVANTHA-- C Grade. 160Points
8. THREAD PATTERN-- DHANUSH-- Third A Grade. 229 Points
9. PALM LEAVE PRODUCTS-- MOHAMMAD RAZIK-- 129 Points
10. NET MAKING-- MOHAMMAD BASHEER-- First A Grade- 246 Points

Wednesday 8 October 2014

ಸಾಕ್ಷರ ಮೌಲ್ಯಮಾಪನ ಎರಡನೇ ಹಂತ

ಸಾಕ್ಷರ ಮೌಲ್ಯಮಾಪನ  ಎರಡನೇ ಹಂತ

ಎರಡನೇ ಹಂತದ ಮೌಲ್ಯಮಾಪನವು ಇಂದು ನಮ್ಮ ಶಾಲೆಯಲ್ಲಿ ಜರಗಿತು. ಎಲ್ಲಾ ಮಕ್ಕಳು ಮೌಲ್ಯಮಾಪನ ಚಟುವಟಿಕೆಯಲ್ಲಿ ಭಾಗವಹಿಸಿದರು.

Wednesday 1 October 2014

ಗಾಂಧಿ ಜಯಂತಿ

ಗಾಂಧಿ ಜಯಂತಿ

ನನ್ನ ಜೀವನವೇ ನನ್ನ ಸಂದೇಶ ವೆಂದು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ನೇ ತಾರೀಕಿನಂದು ವಿಶೇಷವಾದ ರೀತಿಯಲ್ಲಿ ನಡಸಲಾಯಿತು. ಬೆಳಗ್ಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಲಾ ಮುಖೋಪಾಧ್ಯಾಯರು ಪುಷ್ಪ ಹಾರ ಹಾಕಿ ರಾಷ್ಟ್ರ ಪಿತನ ಸ್ಮರಣೆಯನ್ನು ಮಾಡಿದರು. ಬಳಿಕ ಎಲ್ಲಾ ಅಧ್ಯಾಪಕರುಗಳಿಂದಲೂ ವಿದ್ಯಾರ್ಥಿಗಳಿಂದಲೂ ಗಾಂದೀಜಿಗೆ ಪುಷ್ಪಗಳಿಂದ ಅರ್ಚನೆ ನಡೆಯಿತು. ಬಳಿಕ ಗಾಂಧೀಜಿಯವರ ಭಾವಚಿತ್ರದ ಕೆಳಗೆ ಕುಳಿತು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಧರ್ಮ ಗ್ರಂಥಗಳ ಪಠನ, ಸಂದೇಶ ವಾಚನ, ಭಕ್ತಿ ಗೀತೆ ವಿದ್ಯಾರ್ಥಿಗಳಿಂದ ನಡೆಯಿತು.ಬಳಿಕ ಗೈಡ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಇದರಿಂದ ಮಕ್ಕಳಿಗೆ ಗಾಂಧೀಜಿಯವರ ಸರ್ವ ಧರ್ಮ ಸಮಾನ ತತ್ವವನ್ನು ಮಕ್ಕಳು ಕಂಡುಕೊಳ್ಳುವಂತಾಯಿತು. ಬಳಿಕ ಗಾಂಧೀಜಿಯವರ ಪ್ರೀತಿಯ ಭಜನೆಗಳನ್ನು ಕೇಳಿಸಲಾಯಿತು. ದಂಡಿಯಾತ್ರೆಯ ಸಿ.ಡಿ ಪ್ರದರ್ಶನ ಸಡೆಸಲಾಯಿತು.ಬಳಿಕ ಶಾಲಾ ಅಧ್ಯಾಪಿಕೆಯರಿಂದ ಗಾಂದೀಜಿಯ ಜೀವಚರಿತ್ರೆ ,ಸ್ವಾತಂತ್ರ್ಯ ಸಂಗ್ರಾಮ ಹಾಗು ಅಂತಿಮ ದಿನಗಳು ಎಂಬ ಮೂರು ಹಂತಗಳಾಗಿ ಭಾಷಣ ನಡೆಯಿತು. ಗಾಂದೀಜಿಯ ಸೂಕ್ತಿಯನ್ನು ಸಂಗ್ರಹಿಸಿ ಹೇಳಲಾಯಿತು. ಶಾಲಾ ಅಧ್ಯಾಪಿಕೆಯರಾದ ಆಶಾಲತಾ, ರಾಜೇಶ್, ಸಾಧನ, ಜೋಶ್ನ, ಪದ್ಮಾವತಿ ಉಪಸ್ಥಿತರಿದ್ದು ಯೋಗ್ಯ ಮಾರ್ಗ ದರ್ಶನ ನೀಡಿದರು. ಮಕ್ಕಳಿಗೆ ಕಲ್ಲು ಸಕ್ಕರೆ ಹಂಚಲಾಯಿತು.