Wednesday 1 October 2014

ಗಾಂಧಿ ಜಯಂತಿ

ಗಾಂಧಿ ಜಯಂತಿ

ನನ್ನ ಜೀವನವೇ ನನ್ನ ಸಂದೇಶ ವೆಂದು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ನೇ ತಾರೀಕಿನಂದು ವಿಶೇಷವಾದ ರೀತಿಯಲ್ಲಿ ನಡಸಲಾಯಿತು. ಬೆಳಗ್ಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಲಾ ಮುಖೋಪಾಧ್ಯಾಯರು ಪುಷ್ಪ ಹಾರ ಹಾಕಿ ರಾಷ್ಟ್ರ ಪಿತನ ಸ್ಮರಣೆಯನ್ನು ಮಾಡಿದರು. ಬಳಿಕ ಎಲ್ಲಾ ಅಧ್ಯಾಪಕರುಗಳಿಂದಲೂ ವಿದ್ಯಾರ್ಥಿಗಳಿಂದಲೂ ಗಾಂದೀಜಿಗೆ ಪುಷ್ಪಗಳಿಂದ ಅರ್ಚನೆ ನಡೆಯಿತು. ಬಳಿಕ ಗಾಂಧೀಜಿಯವರ ಭಾವಚಿತ್ರದ ಕೆಳಗೆ ಕುಳಿತು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಧರ್ಮ ಗ್ರಂಥಗಳ ಪಠನ, ಸಂದೇಶ ವಾಚನ, ಭಕ್ತಿ ಗೀತೆ ವಿದ್ಯಾರ್ಥಿಗಳಿಂದ ನಡೆಯಿತು.ಬಳಿಕ ಗೈಡ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಇದರಿಂದ ಮಕ್ಕಳಿಗೆ ಗಾಂಧೀಜಿಯವರ ಸರ್ವ ಧರ್ಮ ಸಮಾನ ತತ್ವವನ್ನು ಮಕ್ಕಳು ಕಂಡುಕೊಳ್ಳುವಂತಾಯಿತು. ಬಳಿಕ ಗಾಂಧೀಜಿಯವರ ಪ್ರೀತಿಯ ಭಜನೆಗಳನ್ನು ಕೇಳಿಸಲಾಯಿತು. ದಂಡಿಯಾತ್ರೆಯ ಸಿ.ಡಿ ಪ್ರದರ್ಶನ ಸಡೆಸಲಾಯಿತು.ಬಳಿಕ ಶಾಲಾ ಅಧ್ಯಾಪಿಕೆಯರಿಂದ ಗಾಂದೀಜಿಯ ಜೀವಚರಿತ್ರೆ ,ಸ್ವಾತಂತ್ರ್ಯ ಸಂಗ್ರಾಮ ಹಾಗು ಅಂತಿಮ ದಿನಗಳು ಎಂಬ ಮೂರು ಹಂತಗಳಾಗಿ ಭಾಷಣ ನಡೆಯಿತು. ಗಾಂದೀಜಿಯ ಸೂಕ್ತಿಯನ್ನು ಸಂಗ್ರಹಿಸಿ ಹೇಳಲಾಯಿತು. ಶಾಲಾ ಅಧ್ಯಾಪಿಕೆಯರಾದ ಆಶಾಲತಾ, ರಾಜೇಶ್, ಸಾಧನ, ಜೋಶ್ನ, ಪದ್ಮಾವತಿ ಉಪಸ್ಥಿತರಿದ್ದು ಯೋಗ್ಯ ಮಾರ್ಗ ದರ್ಶನ ನೀಡಿದರು. ಮಕ್ಕಳಿಗೆ ಕಲ್ಲು ಸಕ್ಕರೆ ಹಂಚಲಾಯಿತು.

No comments:

Post a Comment