ABOUTUS




 
ನಮ್ಮ ಶಾಲೆ
ಸಮಾಜದಲ್ಲಿ ಶಾಲೆಗೆ ಪ್ರಮುಖ ಸ್ಥಾನವಿದೆ.. "ಸಮುದಾಯದತ್ತ ಶಾಲೆ'
ಎನ್ನುವ ಘೋಷಣಾ ವಾಕ್ಯದೊಂದಿಗೆ ಕಾರ್ಯವೆಸಗುವ ಶಾಲೆಯಾಗಿದೆ ಜಿ. ಯು. ಪಿ. ಶಾಲೆ ಉದ್ಯಾವರ.
ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ತವರೂರಿನಲ್ಲಿ, ಷಷ್ಟಿ ದೇವಸ್ಥಾನವೆಂದೇ ಕೇರಳದ ಉದ್ದಗಲದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಜೇಶ್ವರ ಶ್ರೀ ಅನಂತಪದ್ಮನಾಭ ದೇವಸ್ಥಾನ ದಕ್ಷಿಣ ಭಾಗದಲ್ಲಿಯೂ,ಹಿಂದು ಮುಸ್ಲಿಂ ಭಾಂದವ್ಯವನ್ನು ಸಾರುವ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಉತ್ತರ ಭಾಗದಲ್ಯಿಯೂ ನೆಲೆಸಿಕೊಂಡು ಪೂರ್ವದಲ್ಲಿ ಬಡಾಜೆ ಶ್ರೀ ಮಹಾಲಿಂಗೇಶ್ವರನ ತವರೂರಗಿರುವ ಈ ಪ್ರದೇಶ ಪಶ್ಚಿಮ ಭಾಗದಲ್ಲಿ ವಿಶಾಲವಾಗಿ ಅರಬೀ ಸಮುದ್ರದ ಕಿನಾರೆಯನ್ನು ಹೊಂದಿರುವ ಸುಂದರವಾದ ತುಳುನಾಡಿನಲ್ಲಿ ನಮ್ಮ ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರವು ನೆಲೆಸಿದೆ.

ಹಿನ್ನಲೆ

ಮಂಜೇಶ್ವರ ಪಂಚಾಯತಿಗೆ ಒಳಪಟ್ಟ ಮಂಜೇಶ್ವರ ಬ್ಲ್ಲೋಕ್ ಆಪೀಸಿನ ಸಮೀಪ ಈ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಾಗಿ ಸ್ಥಾಪನೆಯಾಗಿತ್ತು. ಬಳಿಕ ಮಂಜೇಶ್ವರ ಗೇಟಿನ ಸಮೀಪದ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಸ್ಥಾಪನೆಗೊಂಡ ನಿಖರವಾದ ವರ್ಷ ತಿಳಿಯದಿದ್ದರೂ ಕೆಲವೊಂದು ಮಾಹಿತಿ ಪ್ರಕಾರ 1901 ರಲ್ಲಿ ಸ್ಥಾಪನೆಯಾಗಿದೆ ಯೆಂದು ತಿಳಿಯಬಹುದು. 1980 ರಲ್ಲಿ ಹೆತ್ತವರ ಹಾಗೂ ಊರವರ ಸತತ ಪ್ರಯತ್ನದ ಫಲವಾಗಿ ಭಡ್ತಿಗೊಂಡು ಯು.ಪಿ.ಶಾಲೆಯಾಗಿ ಪ್ರಸ್ತುತ ಮಂಜೇಶ್ವರ ಗುಡ್ಡೆಯಲ್ಲಿ ಕಾರ್ಯವೆಸಗುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಂಜೇಶ್ವರ ಗೇಟಿನ ಬಳಿಯಿಂದ ವರ್ಗಾವಣೆಗೊಂಡಿತು. ಅದುವರೆಗೆ ಗೇಟಿನ ಬಳಿ ಒಂದರಿಂದ ಏಳನೇ ತರಗತಿ ವರೆಗೆ ಇದ್ದ ಶಾಲೆಯು ಬಳಿಕ ಒಂದರಿಂದ ನಾಲ್ಕರ ವರೆಗೆ ಗೇಟಿನ ಸಮೀಪವೂ ಐದರಿಂದ ಏಳರವರೆಗೆ ಉದ್ಯಾವರ ಗುಡ್ಡೆಯಲ್ಲೂ ಕಾರ್ಯಾಚರಿಸಲು ತೊಡಗಿತು. ಆಗ ಶ್ರೀ. ಶಂಕರನಾರಾಯಣ ನಾವಡರು ಈ ಎರಡೂ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದರು. ಒಂದೇ ಶಾಲೆಯಾಗಿ ಹತ್ತು ವರುಷಗಳ ಕಾಲ ಮುಂದುವರಿಯಿತು. ಬಳಿಕ 1990 ರಲ್ಲಿ ಈ ಶಾಲೆಯು ಬೇರ್ಪಡೆಗೊಂಡಿತು. ಆ ವೇಳೆಯಲ್ಲಿ ಶ್ರೀಮತಿ. ಪದ್ಮಿನಿಯವರು ಮುಖ್ಯೋಪಾಧ್ಯಾಯಿನಿಯಾಗಿದ್ದರು. ಬಳಿಕ 1998.99 ರ ಕಾಲಾವಧಿಯಲ್ಲಿ ಶ್ರೀ. ವಾಸುದೇವ ಶೆಟ್ಟಿ, , 2001.2003 ರ ಕಾಲಾವಧಿಯಲ್ಲಿ ಶ್ರೀ. ಪ್ರಭಾಕರ ಅಗ್ಗಿತ್ತಾಯ, 2004.2008 ರ ಸಮಯದಲ್ಲಿ ಆನಂದ ಮೂಲ್ಯ, 2009.2011 ರ ಕಾಲಾವಧಿಯಲ್ಲಿ ಶ್ರೀಮತಿ. ಶಾಂತಕುಮಾರಿ ಮುಂತಾದವರು ಕಾರ್ಯನಿರ್ವಹಿಸಿರುವರು. ಇದೀಗ 2012 ರಿಂದ ಶ್ರೀ. ಪಿ. ಎಸ್. ಪ್ರಭಾಕರರವರು ಈ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಪ್ರಶಾಂತವಾದ ವಾತಾವರಣದಲ್ಲಿ ಸುಮಾರು ಮೂರು ಎಕರೆ ಸ್ಥಳವನ್ನು ಹೊಂದಿರುವ ಸುಸಜ್ಜಿತವಾದ ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5 ಅಧ್
ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5 ಅಧ್ಯಾಪಕರು,ಓರ್ವ ಹಿಂದಿ ಅಧ್ಯಾಪಕರು ಹಾಗೂ ಓರ್ವ ಆಫೀಸ್ ಎಟೆಂಡರ್ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

OUR  HM  AND  STAFF  MEMBERS.

No comments:

Post a Comment