Sunday 20 July 2014

ವಿಶ್ವಮಾದಕವಸ್ತು ವಿರುದ್ಧ ದಿನ

ವಿಶ್ವಮಾದಕವಸ್ತು ವಿರುದ್ಧ ದಿನ

ನಮ್ಮ ಶಾಲೆಯಲ್ಲಿ ಜೂನ್ 26ರಂದು ವಿಶ್ವ ಮಾದಕ ವಸ್ತು ವಿರುದ್ಧ ದಿನಾಚರಣೆಯನ್ನು ಆಚರಿಸ ಲಾಯಿತು
ಮುಖ್ಯೋಪಾಧ್ಯಾಯರು ದಿನದ ಮಹತ್ವವನ್ನು  ವಿದ್ಯಾರ್ಥಿಗಳಿಗೆ ತಿಳಿಸಿದರು.ಬಳಿಕ ಜನಜಾಗ್ರತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. "ಬೀಳದಿರಿ ವ್ಯಸನದ  ಬಲೆಯೊಳಗೆ", "ಮಾದಕ ದ್ರವ್ಯ ಸೇವನೆಯಿಂದ ಮನುಕುಲನಾಶ", "ಮಧ್ಯಸೇವನೆಯ ಗಮ್ಮತ್ತು ಆಗುವುದು ಜೀವಕ್ಕೆ ಆಪತ್ತು "......ಘೋಷಣೆಗಳನ್ನು ಕೂಗುತ್ತಾ ಮಾದಕ ದ್ರವ್ಯಗಳ ವಿರುದ್ಧ ಫಲಕಗಳನ್ನು ಪ್ರದರ್ಶಿಸುತ್ತಾ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ಜಾಥಾ ನಡೆಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು ಆರೋಗ್ಯ ಇಲಾಖೆಯಹೆಲ್ತ್ ಇನ್ಫೆಕ್ಟರ್ ಶ್ರೀ ಮಹೇಶ್, ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಶ್ರೀಮತಿ ಮೋಳಿ ಉಪಸ್ಥಿತರಿದ್ದರು.ನಿರಂತರ ಮಾದಕ ದ್ರವ್ಯಗಳನ್ನು ಬಳಸುವುದರಿಂದ ಮಾರಕ ರೋಗಗಳಾದ ಕೇನ್ಸರ್ ಗೆ ತುತ್ತಾಗಿಮಾನವನು ನಾಶದ ಹಾದಿ ಹಿಡಿಯುವನು. ಅದರ ಬಗ್ಗೆ ಜಾಗ್ರತರಾಗಬೇಕೆಂದು ಅವರು ತಿಳಿಸಿದರು.ಆದುದರಿಂದ ಅದಕ್ಕೆ ಬಲಿಯಾಗದೆ , ದಾಸರಾಗದೆ , ಸಮಾಜದ ಉತ್ತಮಪ್ರಜೆಗಳಾಗಿ ಬಾಳುವ ಎಂಬ ಪ್ರತಿಜ್ಞೆಯನ್ನು  ವಿದ್ಯಾರ್ಥಿಗಳ ಜೊತೆಯಲ್ಲಿದ್ದು ಸ್ವೀಕರಿಸಿದರು.ಬಳಿಕ ಮಾದಕ ದ್ರವ್ಯಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ತೋರಿಸುವ ಕೆಲವು ಸ್ಲೈಡ್ ಗಳನ್ನು  ತೋರಿಸಲಾಯಿತು …ಮ.ಕ್ಕಳು ರಚಿಸಿದ ಪೋಸ್ಟರ್ ಗಳನ್ನು ಪ್ರದರ್ಶಿಸಲಾಯಿತು






No comments:

Post a Comment